Sunday, May 18, 2014


ಫ್ಯುಜಿಟಾ ಮಾಪಕ (ಎಫ್‌-ಸ್ಕೇಲ್‌ ) 

ಫ್ಯುಜಿಟಾ ಮಾಪಕ (ಎಫ್‌-ಸ್ಕೇಲ್‌ ) ಅಥವಾ ಫ್ಯುಜಿಟಾ-ಪಿಯರ್ಸನ್‌ ಮಾಪಕ ವು ಟೊರ್ನೆಡೋ (ಸುಂಟರಗಾಳಿ) ತೀವ್ರತೆಯನ್ನು ಅಳೆಯುವ ಒಂದು ಮಾಪಕವಾಗಿದೆ. ಇದರಲ್ಲಿ ಟೊರ್ನೆಡೋ (ಸುಂಟರಗಾಳಿ)ಗಳಿಂದ ಮಾನವ ನಿರ್ಮಿತ ರಚನೆಗಳಿಗೆ ಮತ್ತು ಸಸ್ಯಸಂಪತ್ತಿಗೆ ಎಷ್ಟು ಹಾನಿಯಾಗಿದೆ ಎಂಬುದನ್ನು ಮುಖ್ಯವಾಗಿ ಆಧರಿಸಿ, ಅಳೆಯಲಾಗುತ್ತದೆ.
Fujita scale
F0F1F2F3F4F5

 ಅಧಿಕೃತ ಫ್ಯುಜಿಟಾ ಮಾಪಕ ವರ್ಗೀಕರಣವನ್ನು ಹವಾಮಾನತಜ್ಞರು (ಮತ್ತು ಇಂಜಿನಿಯರ್‌ಗಳು) ಭೂಮಿ ಮೇಲೆ ಮತ್ತು/ಅಥವಾ ವೈಮಾನಿಕವಾಗಿ ಹಾನಿಯ ಸಮೀಕ್ಷೆಯನ್ನು ಮಾಡಿದ ನಂತರ ನಿರ್ಣಯಿಸುತ್ತಾರೆ. ಜೊತೆಗೆ ಸನ್ನಿವೇಶಗಳನ್ನು ಅವಲಂಬಿಸಿ ಭೂ-ಸುಳಿಯ ವಿನ್ಯಾಸಗಳು(ಚಕ್ರೀಯದ ಗುರುತುಗಳು), ರಾಡಾರ್‌ ಪತ್ತೆಹಚ್ಚುವಿಕೆ , ಪ್ರತ್ಯಕ್ಷ ಸಾಕ್ಷಿಗಳ ಸಾಕ್ಷಾಧಾರಗಳು, ಮಾದ್ಯಮದ ವರದಿಗಳು ಮತ್ತು ಹಾನಿಯ ಚಿತ್ರಗಳು ಹಾಗೂ ಚಲನೆಯ ಚಿತ್ರಗಳನ್ನು (ಮೋಶನ್‌ ಪಿಕ್ಚರ್ಸ್‌) ಮುದ್ರಿಸಿಕೊಂಡಿದ್ದು ಸಿಕ್ಕಿದರೆ ಫೋಟೋಗ್ರಾಮೆಟ್ರಿ/ವಿಡಿಯೋಗ್ರಾಮೆಟ್ರಿಗಳನ್ನು ಮಾಪನಕ್ಕೆ ಬಳಸಿಕೊಳ್ಳಲಾಗುತ್ತದೆ.

No comments:

Post a Comment